Ninna hesarididu naane karediruve Song Lyrics In Kannada and English
Singer : Simon Moses
Album : Mahimeya Arasanu Vol 3
ಕನ್ನಡ
ನಿನ್ನ ಹೆಸರಿಡಿದು ನಾನೇ ಕರೆದಿರುವೆ
ಹೆದರದಿರು ಮಗನೇ
ನನ್ನ ಪ್ರಾಣವಾ ನಿನಗಾಗಿ ನೀಡಿರುವೆ
ಚಿಂತಿಸದಿರು ಮಗಳೇ -2
ನಿನ್ನ ಸೃಷ್ಟಿಸಿದ ದೇವರು ನಾನೇ
ನಿನ್ನ ಜೊತೆಯಲ್ಲೇ ನಾನಿರುವೆನು -2
ನಿನ್ನನ್ನೇ ಪ್ರೀತಿ ಮಾಡುತಿರುವೆನು -2
1. ಎಲ್ಲಿರುವೆ ನೀನು ಹೇಗಿರುವೆ ನೀನು
ನಿನ್ನನ್ನುಧರಿಸಲು ನಾನೇ ಬಂದಿರುವೇ
ಕಷ್ಟದ ಕಡಲಲ್ಲಿ ಮುಳುಗಿರುವೆಯೇನೂ
ನಿನ್ನ ವಿಮೋಚಿಸಲು ನಾನೇ ಬಂದಿರುವೇ
ಅಂಜದಿರು ನನ್ ಮಗನೇ ನಿನ್ನನ್ನು ಕೈಬಿಡೆನು
ಕೊರಗದಿರು ನನ್ ಮಗಳೇ ನಿನ್ನನ್ನು ನಾ ತೊರೆಯೆನು
2. ಉಪಯೋಗವಿಲ್ಲವೆಂದು ಕಸವಾಗಿ ಕಂಡರು
ನಿನ್ನವರೇ ನಿನ್ನನ್ನು ದೂರ ತಳ್ಳಿದರು
ನಂಬಿದ ಜನರೆಲ್ಲಾ ನಿನ್ನ ಕೈಬಿಟ್ಟರೂ ನಿಂದಿಸಿ ನಿನ್ನನ್ನು ನೋಯಿಸಿದರೂ
ನಿನ್ ದೇವರು ನಾನಲ್ಲವೋ ನಿನ್ನನ್ನು ನಾ ಮರೆವೆನೆ -2
3. ಅದ್ಭುತವ ಮಾಡುವ ದೇವರು ನಾನ್ ತಾನೇ
ನಿನ್ನಲ್ಲಿ ಮಹತ್ತಾದ ಕಾರ್ಯ ಮಾಡುವೆನು
ಮರಣವ ಗೆದ್ದಂತ ರಕ್ಷಕನು ನಾನ್ ತಾನೇ
ನಿನ್ ಜನರ ಮಧ್ಯದಲ್ಲೇ ಮೇಲಕ್ಕೆತ್ತುವೆನು
ನಂಬು ನಿನ್ನ ನಡೆಸುವೆನು ನಿನಗಾಗಿ ಮಾರ್ಗ ಮಾಡುವೆನು -2
English
Ninna hesarididu naane karediruve
hedaradiru magane
nanna praanava ninagaagi neediruve
chintisadiru magale -2
ninna srushtisida devaru naane
ninna joteyalle naaniruvenu -2
ninnanne preeti maadutiruvenu -2
1. Elliruve neenu hegiruve neenu
ninnannudharisalu naane bandiruve
kashtada kadalalli mulugiruveyeenu
ninna vimochisalu naane bandiruve
anjadiru nan magane ninnannu kaibidenu
koragadiru nan magale ninnannu na toreyenu
2. Upayogavillavendu kasavaagi kandaru
ninnavare ninnannu doora tallidaru
nambida janarella ninna kaibittaru nindisi ninnannu noyisidaru
nin devaru naanallavoninnannu na marevene...2.
3. Adbutava maaduva devaru naan taane
ninnalli mahattaada kaarya maaduvenu
maranava geddanta rakshakanu naan taane
nin janara madhyadalle melakkettuvenu
nambu ninna nadesuvenu ninagaagi maarga maaduvenu -2