Kurudagi na nambuvavanu nine Song Lyrics In Kannada and English
Singer : Prakash Halmidi
Album : Tereda Hrudaya
ಕನ್ನಡ
ಕುರುಡಾಗಿ ನಾ ನಂಬುವವನು ನೀನೆ ಬದಲಾಯಿಸುವೆ ನನ್ನ ಜೀವಿತ
ನಾ ಯೋಚಿಸದೆ ನಂಬುವವನು ನೀನೆ
ಬದಲಾಯಿಸುವೆ ನನ್ನ ಜೀವಿತಾ
ಅದು ನಿನ್ನಿಂದ ಮಾತ್ರವೇ ಆಗುವುದೆಂದು ನಂಬಿರುವೆ
||ನಂಬುವೆ ನಾ ನಂಬುವೆ ನಿನ್ನನ್ನೇ ನಾ ನಂಬುವೆ
ನಂಬುವೆ ನಿನ್ನ ಮಾತ್ರ ನಂಬುವೆ ಯೇಸುವೇ ನಾ ನಂಬುವೆ||
1.ನಾ ನಂಬಿದೆ ನಂಬಿಸುವ ಲೋಕವ ನಿರಾಶೆಗೊಂಡೆನು ಏಕಾಂಗಿ ಆದೆನು
ಏಕಾಂಗಿ ಆದ ನನ್ನನ್ನು
ಹುಡುಕಿ ಬಂದ ನಿನ್ನ ಪ್ರೀತಿಯ
ಕಹಿಯಾದ ನನ್ನ ಬದುಕನು
ಮಧುರ ಮಾಡಿ ಕೊಟ್ಟ ಪ್ರೀತಿಯಾ
2.ನಾ ಕಂಡೆನು ದೈವಿಕ ಪ್ರೀತಿಯಾ
ಕಲ್ವಾರಿ ಶಿಲುಬೆಯ ನಿಸ್ವಾರ್ಥ ಪ್ರೀತಿಯ
ಸರಿಪಡಿಸಲಾಗದ ನನ್ನನ್ನು
ಮರುಜೀವ ಕೊಟ್ಟ ಯೇಸುವೆ
ಮುರಿಯಲ್ಪಟ ನನ್ನ ಬದುಕನು
ಹೊಸದಾಗಿ ರೂಪಿಸಿದ ಯೇಸುವೇ.
English
Kuruḍāgi nā nambuvavanu nīne badalāyisuve nanna jīvita
nā yōcisade nambuvavanu nīne
badalāyisuve nanna jīvitā
adu ninninda mātravē āguvudendu nambiruve
||nambuve nā nambuve ninnannē nā nambuve
nambuve ninna mātra nambuve yēsuvē nā nambuve||
1.Nā nambide nambisuva lōkava nirāśegoṇḍenu ēkāṅgi ādenu
ēkāṅgi āda nannannu
huḍuki banda ninna prītiya
kahiyāda nanna badukanu
madhura māḍi koṭṭa prītiyā
2.Nā kaṇḍenu daivika prītiyā
kalvāri śilubeya nisvārtha prītiya
saripaḍisalāgada nannannu
marujīva koṭṭa yēsuve
muriyalpaṭa nanna badukanu
hosadāgi rūpisida yēsuvē.