Bhaya padabeda magane Song Lyrics In Kannada & English
ಭಯಪಡಬೇಡ ಮಗನೆ ಕಳವಳವೇಕೆ ಇಸ್ರಾಯೆಲೇ
ಭಯ ಪಡಬೇಡ ಮಗನೆ ಭಯಪಡಬೇಡ ಮಗಳೆ (2)
ಜೊತೆಯಲ್ಲಿ ನಾನಿಲ್ಲವೆ ನಿನ್ನ ನಡೆಸೋನು ನಾನಲ್ಲವೆ (2)
ಆದಿಯಿಂದ ನಾ ನಿನ್ನ ನಡೆಸಲಿಲ್ಲವೆ ಇನ್ನು ಮುಂದೆಯು ನಡೆಸುವೆನು (2)
ಕಷ್ಟದ ಸಮಯದಿ ನಾನಿದ್ದು ಕಣ್ಣೀರಿನ ಸಮಯದಿ ಜೊತೆಯಿದ್ದು (2)
ನಾ ನಿನ್ನ ನಡೆಸುವೆನು ಎಂದೂ ನಾ ನಿನ್ನ ಜೊತೆಯಿರುವೆನು (2)
ಪಾಪದ ಕೆಸರಲ್ಲಿ ಮುಳುಗಿ ಹೋಗಿರುವೆಯಾ ಎತ್ತುವರಾರೆಂದು ನೋಡುತ್ತಿರುವೆಯಾ (2)
ಕೆಸರಿಂದ ಮೇಲಕ್ಕೆ ಎತ್ತುವೆ ನನ್ನ ರಕ್ತದಿಂದ ನಿನ್ನ ತೊಳೆಯುವೆ (2)
ನಂಬಿಕೆಯ ಬಲ ಪಡಿಸುವೆ ನಿನಗೆ ಜಯಮಾಲೆಯನ್ನು ನೀಡುವೆ (2)
ತಾಯಿಯ ಗರ್ಭದಲ್ಲಿ ನಾ ನಿನ್ನ ಕಾಣಲಿಲ್ಲವೆ ನನ್ನ ಅಂಗೈಲಿ ಚಿತ್ರಿಸಲಿಲ್ಲವೆ (2)
ತಂದೆ ತಾಯಿಯು ನಿನ್ನನು ತೊರೆದರು ಈ ಲೋಕವೆ ನಿನ್ನನು ಮರೆತರೂ (2)
ನಾ ನಿನ್ನ ಸೇರಿಸಿ ಕೊಳ್ಳುವೆ ನನ್ನ ಕರಗಳಲ್ಲಿ ಎತ್ತಿ ಕೊಳ್ಳುವೆ. (2)
Bhaya padabeda magane kalavalaveke Israyele
Bhaya padabeda magane bhaya padabeda magale (2)
Joteyalli naanillave ninna nadesonu naanallave (2)
Aadiyinda naa ninna nadesalillave innu mundeyu nadesuvenu (2)
Kashtada samayadi naaniddu kannirina samayadi joteyiddu (2)
Naa ninna nadesuvenu endu naa ninna joteyiruve (2)
Paapada kesaralli mulugi hoogiruveya ettuvaraare endu noduttiruveya (2)
Kesarinda meelakke ettuve nanna raktadinda ninna toleyuve (2)
Nambikeya bala padisuve ninage jayamaaleyannu needuve (2)
Taayiya garbhadalli naa ninna kaanalillave nanna angaili chitrisalillave (2)
Tande taayiyu ninnanu toredaru ee lokave ninnanu maretaroo (2)
Naa ninna serisi kolluve nanna karagalli etti kolluve (2)