Aene aadaru na haege iddaru | Kannada Christian Song Lyrics

Aene aadaru na haege iddaru Song Lyrics In Kannada and English

Singer : Simon Moses
Album : Mahimeya Arasanu Vol 5
ಕನ್ನಡ

ಏನೇ ಆದರೂ ನಾ ಹೇಗೆ ಇದ್ದರೂ
ನಿನ್ ಪ್ರೀತಿ ನನ್ನಲ್ಲಿ ಬದಲಾಗದು ಯೆಸಪ್ಪ
ಯಾರೇ ಇದ್ದರೂ ಇಡೀ ಊರೇ ತೊರೆದರೂ
ನಿನ್ ಕೃಪೆಯು ನನ್ನನ್ನು ಕೈಬಿಡದು ಯೇಸಪ್ಪ ]2

ನನ್ನ ಬಿಟ್ಟು ಕೊಡದ ದೇವ
ಪ್ರತಿಕ್ಷಣವೂ ಜೊತೆಯಲ್ಲಿರುವೆ
ನಿನ್ನದೆಲ್ಲ ನನ್ನದೇ, ನನ್ನದೇ ಯೇಸುವೇ
ನನ್ನ ತಳ್ಳಿ ಬಿಡದ ದೇವಾ ನಿನ್ನ
ಬಿಟ್ಟು ಬಾಳೆನಯ್ಯ
ನನ್ನದೆಲ್ಲಾ ನಿನ್ನದೇ ನಿನ್ನದೇ ಯೇಸುವೇ ]2

1. ಹರಿದ ಬಟ್ಟೆಯೊಳಗೂ ಹರಿಯದಂತ ಮಹಿಮೆಯನ್ನಿಡುವೆ
ಎಸೆದ ಜಾಗದಲ್ಲೇ ಜನಾಂಗವನ್ನೆಬ್ಬಿಸುವೆ ||2
ಊಹೆಗೂ ನಿಲುಕದಂತ ಪ್ರೀತಿಯ ನನಗೆ ಕೊಟ್ಟು
ನಿನ್ ಕೃಪೆಯ ಧಾರೆಯೆರೆದು ನನ್ನ ಹೃದಯದಿ ವಾಸಿಸುವೆ ||2

2. ಕಷ್ಟ ಕಾಲದಲ್ಲೂ ನೀ ನನ್ನನ್ನು ಕೈಬಿಡಲಿಲ್ಲ
ಮರಣದ ಹಾದಿಯಲ್ಲೂ ನೀ ನನ್ನನ್ನು ಮರೆಯಲಿಲ್ಲ ||2
ನನ್ ಕೊರತೆಯೆಲ್ಲ ನಿಗಿಸಿ ದಿನದಿನವೂ ಪೋಷಿಸಿರುವೆ
ನಿನ್ ಪ್ರೀತಿ ಕರುಣೆಯಿಂದಲೇ ನಾ ಜೀವಂತವಾಗಿರುವೆ ||2

3. ನನ್ನ ನಂಬಿಕೆಯನ್ನು ನೀ ವ್ಯರ್ಥಗೊಳಿಸೋದಿಲ್ಲ
ನನ್ನ ಜೀವನ ಹೀಗೇ ಇದ್ದಂತೆ ಇರೋದೇ ಇಲ್ಲ ||2
ನಾ ಸುರಿಸಿದ ಪ್ರತಿ ಕಣ್ಣೀರ ನಿಜ ಕಾರಣ ಅರಿತವನೇ
ನೀ ಹೇಗೂ ಮಾರ್ಗ ಮಾಡುವೇ ಎಂದು ನಿನ್ನನ್ನೇ ನಂಬಿರುವೆ ||2

 

English

Aene aadaru na haege iddaru
nin preeti nannalli badalaagadu yesappa
yaare iddaru idee oore toredaroo
nin krupeyu nannannu kaibidadu Yesappa |2

Nanna bittu kodada deva
pratikshanavu joteyalliruve
ninnadella nannadae, nannade Yesuvae
nanna talli bidada deva
ninna bittu baalenayya
nannadella ninnade ninnade Yesuvae |2

1. Harida batteyolagu hariyadanta mahimeyanniduve
eseda jaagadalle janaangavannebbisuve ||2
oohegu nilukadanta preetiya nanage kottu
nin krupeya dhaareyeredu nanna hrudayadi vaasisuve ||2

2. Kashta kaaladallu nee nannannu kaibidalilla
maranada haadiyallu nee nannannu mareyalilla ||2
nan korateyella nigisi dinadinavu poshisiruve
nin preeti karuneyindale na jeevantavaagiruve ||2

3. Nanna nambikeyannu nee vyarthagolisodilla
nanna jeevana heege iddante irode illa ||2
na surisida prati kanneera nija kaarana aritavanae
nee haegu maarga maaduve endu ninnanne nambiruve ||2

Leave a Comment

Your email address will not be published. Required fields are marked *

Scroll to Top