baa yesuvalli baa Song Lyrics In Kannada & English
ಬಾ ಯೇಸುವಲ್ಲಿ ಬಾ,
ನಿನ್ನ ಹೃದಯವ ಯೇಸುವಿಗೆ ತಾ,
ನಿನ್ನ ಕಾಯುವ ಕುರುಬನವ (೨),
ಹುಟ್ಟಿದಾಗ ಏನು ಹೊತ್ತು ತಂದೆ,
ಸತ್ತಾಗೇನು ಕೊಂಡುಹೋಗುವೆ ನೀನು (೨),
ಎಲ್ಲಿಂದ ಬಂದೆ ನೀ ಈ ಜಗಕೆ,
ಎಲ್ಲಿ ಹೋಗಬೇಕು ನಿನಗೆ ಗೊತ್ತೆ? (೨)
||ಬಾ ಯೇಸುವಲ್ಲಿ ಬಾ||
ಪ್ರೇಮಕ್ಕಾಗಿ ಅಲೆದು ಸೋತೆ ನೀನು,
ನಂಬಿದವರ ಪ್ರೇಮವೆಲ್ಲ ಸುಳ್ಳು (೨),
ಜೀವಕೊಟ್ಟ ಪ್ರೇಮ ಉಂಟು ನೋಡು,
ಶಿಲುಬೆ ಮರಣ ಸತ್ಯ ಪ್ರೇಮ ಕಾಣು (೨)
||ಬಾ ಯೇಸುವಲ್ಲಿ ಬಾ||
ಹಣದ ಹಿಂದೆ ಓಡಿದ್ದು ನೀ ಸಾಕು,
ಮರಣ ಬರಲು ಹಣವದೆಲ್ಲ ದೂಳು (೨),
ಯೇಸುವಿನ ಹಿಂದೆ ಬೇಗ ಓಡು,
ನಿತ್ಯಜೀವ ದಕ್ಕುತ್ತಾಗ ನೋಡು (೨)
||ಬಾ ಯೇಸುವಲ್ಲಿ ಬಾ||
ನಾನು ಎಂಬ ಅಹಂಕಾರ ಸಾಕು,
ಆರು ಅಡಿ ಮಣ್ಣು ಕೊನೆಗೆ ನೋಡು (೨),
ಸ್ಥಾನ ಮಾನ ಸ್ಥಿರವಲ್ಲ ನೋಡು,
ದೀನರಲ್ಲಿ ಯೇಸುವನ್ನು ಕಾಣು (೨)
||ಬಾ ಯೇಸುವಲ್ಲಿ ಬಾ||
Ba Yesuvalli ba,
Ninna hrudayava Yesuvige thaa,
Ninna kaayuva kurubana (2),
Huttidaga enu hottu tande,
Sattaga enu konduhoguve neenu (2),
Ellinda bande nee ee jagake,
Ellige hogabeku ninage gotte? (2)
||Ba Yesuvalli ba||
Premakagi aledu sote neenu,
Nambidavara premavella sollu (2),
Jeevakkotta prema untu nodu,
Shilube marana satya prema kaanu (2)
||Ba Yesuvalli ba||
Hanada hinde odu idu ne saaku,
Marana baralu hanavadella doolu (2),
Yesuvina hinde bega oodu,
Nityajeeva dakkuttaga nodu (2)
||Ba Yesuvalli ba||
Naanu emba ahankaara saaku,
Aru adi mannu konege nodu (2),
Sthaana maana sthiiravalla nodu,
Deenaru Yesuvannu kaanu (2)
||Ba Yesuvalli ba||