Bhayapadabeda kalavala nanna manave | kannada christian song lyrics

Bhayapadabeda kalavala nanna manave Song Lyrics In Kannada & English

ಕನ್ನಡ
ಭಯಪಡಬೇಡ ಕಳವಳ ನನ್ನ ಮನವೇ
ಧೈರ್ಯದಿಂದ ಮುಂದೆ ಸಾಗು
ಸೇನಾಧೀಶ್ವರನು ಯುದ್ಧಶೂರನು
ನಿನ್ನ ಮುಂದೆ ನಡೆಯುವರು

1.ಫರೋಹನ ರಥಬಲದಿಂದ ನೀನಂತು ಹೆದರಬೇಡ
ಸೀಸೆರನ ಸೈನ್ಯಗಳಿಂದ ನೀನಂತು ಭಯಪಡಬೇಡ ||2||
ಯುದ್ಧವು ನಿನ್ನದಲ್ಲ ಯೇಹೋವನೇ ಯುದ್ಧಮಾಡುವ

2.ಗೊಲ್ಯಾತನು ಅಡ್ಡಬಂದರೂ ನೀನಂತು ಹೆದರಬೇಡ
ಸೌಲನು ಹಿಂದಟ್ಟಿದರೂ ನೀನಂತು ಭಯಪಡಬೇಡ ||2||
ನಿನಗೆದುರಾಗಿ ಕಲ್ಪಿಸಿದ ಯಾವ ಆಯುಧ ಜಯಿಸದು

3.ಹಗಲಲ್ಲಿ ಹಾರಿ ಬರುವ ಬಾಣಕ್ಕೆ ಹೆದರಬೇಡ
ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ ಭಯಪಡಬೇಡ ||2||
ನಿನ್ನ ಕಾಯುವ ದೇವರು ನಿನಗೆ ನೆರಳಾಗಿ ನಿಂತಿಹರು

4.ಭೂತ ಪ್ರೇತ ಕಾಟಗಳಿಂದ ನೀನಂತು ಹೆದರಬೇಡ
ಮಾಟಮಂತ್ರ ಸಂಗತಿಗಳಿಂದ ನೀನಂತು ಭಯಪಡಬೇಡ ||2||
ಲೋಕದಲ್ಲಿರುವವನಿಗಿಂತ ನನ್ನ ಯೇಸು ದೊಡ್ಡವರು
Bhaya padabeda kalavala nanna manave
Dhairyadinda munde saagu
Senadheeshvaranu yuddhashooranu
Ninna munde nadeyuvaru

1.Pharaohna rathabaladinda neenantu hedarabeda
Seeserana sainyagalinda neenantu bhayapadabeda ||2||
Yuddhavu ninnadalla Yehovave yuddhamaduva

2.Golyaatanu addabandaru neenantu hedarabeda
Saulanu hindattidaru neenantu bhayapadabeda ||2||
Ninageduragi kalpisida yava ayudha jayisadu

3.Hagalalli haari baruva baanakke hedarabeda
Kattaleyalli sancharisuva vipattigu bhayapadabeda ||2||
Ninna kayuva devaru ninage neralagi nintiharu

4.Bhoota preta katagalinda neenantu hedarabeda
Maatamantra sangatigalainda neenantu bhayapadabeda ||2||
Lokadalliruvavaniginta nanna Yeshu doddavaru

Leave a Comment

Your email address will not be published. Required fields are marked *

Scroll to Top