Madiddunno maraya adannu | kannada christian song lyrics

Madiddunno maraya adannu Song Lyrics In Kannada & English

ಕನ್ನಡ
ಮಾಡಿದ್ದುಣ್ಣೋ ಮಾರಾಯ ಅದನ್ನು ಹೇಳಿದರೆಯಾಕ ಭಯ
ಬಿತ್ತಿದ್ದನ್ನ ಕೊಯ್ಯಲೇ ಬೇಕು ತಿಳಿಯೋ ನೀನು ಮಾರಾಯ
ಮಾಡಿದ್ದುಣ್ಣೋ ಮಾರಾಯ

1.ಮೇಲಕ್ಕೆ ಎಸೆದರ ಕಲ್ಲ ತಲಿ ಮ್ಯಾಲ ಬೀಳುತೈತಲ್ಲ
ಕೆಸರಾಗ ಎಸೆದರೆ ಕಲ್ಲ ನೀ ಹೊಲಸ ಆಗುತ್ತೀಯಲ್ಲ
ಬೇರೆಯವರಿಗೆ ತೋಡಿದ ಗುಂಡ್ಯಾಗ ನೀನು ಬಿದ್ದೀಯಲ್ಲ ( ಮಾಡಿದ್ದುಣ್ಣೋ)

2.ತೀರ್ಪು ಮಾಡಬ್ಯಾಡಣ್ಣ ಮರು ತೀರ್ಪು ಆಗುವುದು ಅಣ್ಣ
ಕತ್ತಿಹಿಡಿದು ಬ್ಯಾಡಣ್ಣ ಅದರಿಂದ ಆಗುವುದು ಮರಣ
ಬೇರೆ ಯವರಿಗೆ ಹಾಕಿದ ಮಂತ್ರ ಮಾಡ್ತಲ್ಲೋ ಕುತಂತ್ರ ( ಮಾಡಿದ್ದುಣ್ಣೋ)

3.ಯೇಸು ಸ್ವಾಮಿಯ ನಂಬೋ ಜಯ ಮಾಲೆಯ ಹೊಂದುವಿ
ಅಂದು ಲೋಕದ ಅಶೆಯ ತಳ್ಳೋ ಅದು ಮಾಯೆ ಮೋಸದ ಮುಳ್ಳೋ
ಪಾಪವ ತೊರೆದು ಸ್ವಾಮಿಯ ಕರೆದು ಬಾಳೋ ಯೇಸುವ ಪಡೆದು ( ಮಾಡಿದ್ದುಣ್ಣೋ)
Maadiddunno maaraya adannu helidareyaaka bhaya
Bittiddanna koyyale beku tiliyoo neenu maaraya
Maadiddunno maaraya

1.Meleke esedara kalla tali myala beelutaitalla
Kesaraaga esedare kalla nee holasa aguttiyalla
Bereyavarige toadida gundyaga neenu biddiyalla (Maadiddunno)

2.Teerpu maadabyadanna maru teerpu aguvudu anna
Katthihididu byadanna adarinda aguvudu marana
Bere yavarige haakida mantra maadtallo kutantra (Maadiddunno)

3.Yesu swamiya namboo jaya maale honduvi
Andu lokada asheya tallo adu maaye mosada mullo
Paapava toredu swamiya karedu baalo Yeshuva padedu (Maadiddunno)

Leave a Comment

Your email address will not be published. Required fields are marked *

Scroll to Top