Nanna praana irovaregu ninna preeti maaduvenu | Kannada Christian Song Lyrics

Nanna praana irovaregu Song Lyrics In Kannada and English

Singer : Simon Moses
Album : Mahimeya Arasanu Vol 3
ಕನ್ನಡ

ನನ್ನ ಪ್ರಾಣ ಇರೋವರೆಗೂ
ನಿನ್ನ ಪ್ರೀತಿ ಮಾಡುವೆನು
ಈ ಉಸಿರು ಇರೋವರೆಗೂ
ನಿನ್ನ ಸೇವೆ ಮಾಡುವೆನು

ಪ್ರೀತಿ ಮಾಡುವೆನು
ನಿನ್ನ ಪ್ರೀತಿ ಮಾಡುವೆನು -2

1. ಒಳ್ಳೆಯ ದೇವರು ನೀನೇ
ನನ್ನ ಪ್ರೀತಿಸಿದ ಯೇಸುವೆ
ನನಗಾಗಿ ನಿನ್ ಜೀವವ ಕೊಟ್ಟೆ
ನನ್ನ ರಕ್ಷಿಸಿದ ಯೇಸುವೆ ||||2
ನನ್ನ ಪಾಪವೆಲ್ಲಾ ಪರಿಹರಿಸಿ
ನಿನ್ನ ಮಗನಾಗಿ ಮಾಡಿಕೊಂಡೆ ||2

2. ಕಷ್ಟದ ದಿನಗಳಲ್ಲಿ ನೀನು
ನನ್ನ ಕೈಬಿಡದೆ ಕಾಪಾಡಿದೆ
ಆತಂಕ ಎದುರಾಗಿ ಬರಲು
ನನ್ನ ಜೊತೆಗಿದ್ದು ಬಲಪಡಿಸಿದೆ ||||2
ನಾ ದುಃಖಿಸಿದ ದಿನಗಳೆಲ್ಲಾ
ನನ್ನ ಅಪ್ಪಿಕೊಂಡು ಸಂತೈಸಿದೆ ||2

3. ಈ ಒಂದು ಜೀವಿತವ ನಿನಗೆ
ಸಂಪೂರ್ಣವಾಗಿ ಅರ್ಪಿಸುವೆನು
ನಶಿಸುವ ಜನರ ಬಳಿಗೆ
ನಿನ್ನ ಶುಭವಾರ್ತೆ ಕೊಂಡೊಯ್ಯುವೆನು ||||2
ಪ್ರಾಣ ಕೊಟ್ಟ ನಿನ್ ಪ್ರೀತಿಯ
ಈ ಜಗಕ್ಕೆಲ್ಲಾ ಸಾರುವೆನು ||2

 


English

Nanna praana irovaregu
ninna preeti maaduvenu
ee usiru irovaregu
ninna seve maaduvenu

Preeti maaduvenu
ninna preetimaaduvenu

1. Olleya devaru neene
nanna preetisida Yesuve
nanagaagi nin jeevava kotte
nanna rakshisida Yesuve ||||2
nanna paapavella pariharisi
ninna maganaagi maadikonde ||2

2. Kashtada dinagalalli neenu
nanna kaibidade kaapaadide
aatanka eduraagi baralu
nanna jotegiddu balapadiside ||||2
na dhukhisida dinagalella
nanna appikondu santaiside ||2

3. Ee ondu jeevitava ninage
sampoornavaagi arpisuvenu
nashisuva janara balige
ninna shubhavaarte kondoyyuvenu ||||2
praana kotta nin preetiya
ee jagakkella saaruvenu ||2

Leave a Comment

Your email address will not be published. Required fields are marked *

Scroll to Top